ಬರಹ - ಗಣಕಯಂತ್ರದ ಕಡತಗಳಲ್ಲಿ ಭಾರತೀಯ ಭಾಷೆಗಳ ಅಕ್ಷರಗಳನ್ನು ಮೂಡಿಸಲು ಮತ್ತು ಪದ ಸಂಸ್ಕಾರಕವಾಗಿ ಉಪಯೋಗಿಸಬಹುದಾದ ಒಂದು ತಂತ್ರಾಂಶ. ಬರಹ ತಂತ್ರಾಂಶವನ್ನು ತಯಾರಿಸಿದವರು ಶೇಷಾದ್ರಿ ವಾಸು. ಬರಹದ ಮೊಟ್ಟ ಮೊದಲ ಆವೃತ್ತಿ ಜನಬಳಕೆಗೆ ಬಿಡುಗಡೆಯಾದ ದಿನಾಂಕ ೧ ಜನವರಿ ೧೯೯೮. ಬರಹದ ಅತ್ಯಂತ ನವೀನ ಆವೃತ್ತಿ ಎಂದರೆ ಬರಹ ೧೦.೦. ಇದು ಬೆಂಬಲಿಸುವ ಲಿಪಿಗಳು ಮತ್ತು ಭಾಷೆಗಳು ಕೆಳಗಿನಂತಿವೆ. ಬರಹ ತಂತ್ರಾಂಶದ ಪ್ರಾಯೋಗಿಕ ಆವೃತ್ತಿ ಉಚಿತವಾಗಿದ್ದು ಹಲವು ಪರಿಕರಗಳೊಂದಿಗೆ ಪೂರ್ಣ ಆವೃತ್ತಿಯನ್ನು ಹಣಪಾವತಿಸಿ ಪಡೆಯಬಹುದಾಗಿದೆ. ಬರಹ ವಿಂಡೋಸ್ ಆಪರೇಟಿಂಗ್ ಸಿಸ್ಟಂನಲ್ಲಿ ಮಾತ್ರ ಕೆಲಸ ಮಾಡುತ್ತದೆ. ಆದರೂ, ಬರಹದಲ್ಲಿ ಉಳಿಸಿದ ಕಡತಗಳು ಯೂನಿಕೋಡ್ ಮಾದರಿಯಲ್ಲಿದ್ದರೆ, ಅದನ್ನು ಬೇರೆ ಆಪರೇಟಿಂಗ್ ಸಿಸ್ಟಂಗಳಲ್ಲೂ ಕೂಡ ತೆರೆಯಬಹುದು (ಉದಾ: ಯುನಿಕ್ಸ್, ಏ.ಐ.ಎಕ್ಸ್). === ಬರಹ ತಂತ್ರಾಂಶದ ಇತರ ಪರಿಕರಗಳು ಮತ್ತು ಸಂಪಾದಕಗಳು === ಬರಹ ತಂತ್ರಾಂಶದಲ್ಲಿ ಹಲವು ಉಪಯುಕ್ತ ಪರಿಕರಗಳಾದ ಬರಹ ಐ ಎಂ ಇ , ಬರಹ ಪ್ಯಾಡ್ ಮತ್ತು ಟೂಲ್ಸ್ ಪಡೆಯಬಹುದಾಗಿದೆ. ಇವನ್ನು ಯುನಿಕೋಡ್, ಆಸ್ಕಿ ಬರವಣಿಗೆ ಮತ್ತು ಪರಿವರ್ತಕಗಳಾಗಿಯೂ ಉಪಯೋಗಿಸಬಹುದು. == ಬಾಹ್ಯ ಸಂಪರ್ಕಗಳು == ಬರಹ.ಕಾಂ - ಅಧಿಕೃತ ಅಂತರಜಾಲ ತಾಣ ಬರಹ ತಂತ್ರಾಂಶ ರೂಪಿಸಿದ್ದು ಏಕೆ ಮತ್ತು ಹೇಗೆ? 2006-05-29 ವೇಬ್ಯಾಕ್ ಮೆಷಿನ್ ನಲ್ಲಿ. ಕನ್ನಡದಲ್ಲಿ ಈ-ಮೈಲ್ ಕಳಿಸುವುದು : ಬರಹದಲ್ಲಿ ಹೇಗೆ? 2006-06-17 ವೇಬ್ಯಾಕ್ ಮೆಷಿನ್ ನಲ್ಲಿ.